ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ೨೦೧೫ನೇ ಇಸವಿಯಲ್ಲಿ ಹಮ್ಮಿಕೊಂಡ ಮಹತ್ವದ ಯೋಜನೆಗಳ ಅಂಗವಾಗಿ ಎರಡು ಶತಮಾನಗಳಿಗೂ ಮೀರಿದ ಅವಧಿಯ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗಳ ರಚನೆ, ಪ್ರಕಟಣೆಯ ಭಾಗವಾಗಿ ನಿರ್ಧರಿಸಿದ್ದ ೧೭ ಸಂಪುಟಗಳಲ್ಲಿ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕವನ್ನು ೧೪ನೇ ಸಂಪುಟವಾಗಿ ಹೊರತರಲಾಗಿದೆ. ವಿಜ್ಞಾನ-ತಂತ್ರಜ್ಞಾನ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೪ನೇ ಸಂಪುಟವಾಗಿದ್ದರೂ, ಸಂಪುಟ ಸರಣಿಯಲ್ಲಿ ಮುದ್ರಣಗೊಂಡ ಮೊದಲನೆಯ ಸಂಪುಟವಾಗಿದೆ. ಈ ಸಂಪುಟವನ್ನು ಶ್ರೀ ಟಿ. ಆರ್. ಅನಂತರಾಮು ಅವರು ಸಂಪಾದಿಸಿದ್ದಾರೆ. == ಪುಸ್ತಕ ಪರಿವಿಡಿ == === ವಿಜ್ಞಾನ ಸಾಹಿತ್ಯ === === ತಾಂತ್ರಿಕ ಸಾಹಿತ್ಯ === === ಮಾಹಿತಿ ತಂತ್ರಜ್ಞಾನ === == ಉಲ್ಲೇಖಗಳು ==